Thursday, October 4, 2012

ಕಾವೇರಿ ವಿವಾದ - ಶಾಶ್ವತ ಪರಿಹಾರ ಹುಡುಕಿ



ಪ್ರತಿ ಬಾರಿ ಕಾವೇರಿ ವಿವಾದ ತಲೆದೋರಿದಾಗಲೂ ಕೇಳುವಂತೆ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಅನ್ನುವ ಕೂಗು ಈ ಬಾರಿಯೂ ಎದ್ದಿದೆ. ಆದರೆ ಇಂತಹ ಅನ್ಯಾಯ ಪದೇ ಪದೇ ಆಗಲು ಕಾರಣವೇನು ಅನ್ನುವ ಬಗ್ಗೆ ಸಮಾಜದಲ್ಲಿ ಚಿಂತನೆ ನಡೆಯಬೇಕಿದೆ.
ರಾಜ್ಯದ ರಾಜಕಾರಣಿಗಳಲ್ಲಿನ ಒಗ್ಗಟ್ಟಿನ ಕೊರತೆಯೇ ಇಂದಿನ ದುಃಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಹಾಲಿ ನೀರಿನ ಪ್ರಮಾಣ ಹಾಗು ಬರದ ಪರಿಸ್ತಿತಿಯ ಬಗ್ಗೆ ಸಮರ್ಥವಾಗಿ ಸುಪ್ರಿಂ ಕೋರ್ಟ್ ಹಾಗು ಕಾವೇರಿ ಪ್ರಾಧಿಕಾರದ ಮುಂದೆ ವಾದ ಮಂಡಿಸದ ರಾಜ್ಯ ಬಿಜೆಪಿ ಸರ್ಕಾರ ಎಂದು ದೂರುವ ಕಾಂಗ್ರೆಸ್ ನಾಯಕರು, ಕೇಂದ್ರದಲ್ಲಿರುವು ಕಾಂಗ್ರೆಸನ ರಾಜ್ಯದ ಸಚಿವರು ಪ್ರಧಾನಿಯ ಮೇಲೆ ಒತ್ತಡ ತಂದು ರಾಜ್ಯದ ಹಿತ ಕಾಪಾಡುವಲ್ಲಿ ವಿಫಲ ಎಂದು ದೂರುವ ರಾಜ್ಯ ಬಿಜೆಪಿ ಸರ್ಕಾರ. ಈ ಎರಡು ರಾಷ್ಟೀಯ ಪಕ್ಷಗಳ ಧೋರಣೆ ಸರಿ ಇಲ್ಲ ಎಂದು ದೂರುವ ಜೆಡಿಎಸ್ ಈ ಹಿಂದೆ ಕಾವೇರಿ ವಿಚಾರದಲ್ಲಿ ನಡೆದುಕೊಂಡ ರೀತಿ ಇಡಿ ರಾಜ್ಯದ ಜನತೆಗೆ ಗೊತ್ತಿದೆ. ನಾಡಿನ ರಕ್ಷಣೆ ವಿಚಾರದಲ್ಲಿ ತಮಿಳುನಾಡಿನ ರಾಜಕಾರಣಿಗಳೆಲ್ಲರೂ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲದಿರುವುದೇ ಇಂದಿನ ಈ ಸ್ಥಿತಿಗೆ ಕಾರಣವಾಗಿದೆ. ಕಾವೇರಿ ವಿಚಾರವಾಗಿ ರೈತರ ಪಕ್ಷದ ಮುಖ್ಯಮಂತ್ರಿ ಮಣ್ಣಿನ ಮಗ ದೇವೇಗೌಡ ರಾಧಿಯಾಗಿ ಎಲ್ಲ ಮುಖ್ಯಮಂತ್ರಿಗಳು ಬರದ ನಡುವೆಯು ತಮಿಳುನಾಡಿಗೆ ನೀರು ಬಿಟ್ಟು ಕೃತಾರ್ಥರದವರೆ. ಈ ಎಲ್ಲರಿಗು ಅಪವಾದವೆಂಬಂತೆ ಸುಗ್ರೀವಾಜ್ಞೆ ಮೂಲಕ ಕಾವೇರಿ ನೀರು ಬಿಡದೆ ಕೆಚ್ಚೆದೆ ತೋರಿದ ಏಕೈಕ ನಾಯಕ ಬಂಗಾರಪ್ಪ
ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ರಾಜ್ಯದ ರಾಜಕಾರಣಿಗಳೆಲ್ಲ ಒಗ್ಗಟ್ಟಗಿ ಕೂತು ವ್ಯರ್ಥ ಪ್ರಲಾಪ ಮಾಡುವ ಬದಲು ಶಾಶ್ವತ ಪರಿಹಾರ ಹುಡುಕಿ ತಮಿಳುನಾಡು ರಾಜ್ಯದೊಂದಿಗೆ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ ಈ ವ್ಯವಸ್ಥೆ ಹೀಗೆಯೇ ಮುಂದುವರೆದಲ್ಲಿ ಪ್ರತಿ ಬಾರಿ ನಮ್ಮ ನಾಡಿನ ನೆಲ, ಜಲ, ನುಡಿ, ಬದುಕಿನ ಪ್ರಶ್ನೆಗಳು ಎದ್ದಾಗಲೂ ಕನ್ನಡಿಗರು ಬೀದಿ ಹೋರಾಟ, ಚಳುವಳಿ ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ಅವುಗಳು ಶಾಶ್ವತವಾದ ಯಾವುದೇ ಪರಿಹಾರವನ್ನು ಕೊಡಲಾರವು.