Friday, September 7, 2012


ಹೈವೇ ಮೇಲೆ ವಾಜಪೇಯಿ ನೆನಪಾದಾಗ !
 
ನಾನು ತುಂಬಾ ಇಷ್ಟಪಡುವ ರಾಜಕಾರಣಿ, ಮುತ್ಸದಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ನಾನು ಬರೆದ ಲೇಖನ

ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಮಾಡುವಾಗಲ್ಲೆಲ ಅದೇಕೋ ನಮಗೆ ಅರಿವಿಲ್ಲದಂತೆ ಭಾರತದ ಮಾಜಿ ಪ್ರಧಾನಿ, ನಿಸ್ವಾರ್ಥಿ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡಿದ್ದ ಮಹಾನ್ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿರವರು ಮತ್ತೆ ಮತ್ತೆ ನೆನಪಗುತ್ತಾರೆ.
 
 
ಕೇವಲ ಕೆಲವೇ ವರ್ಷಗಳ ಹಿಂದೆ ಇದೇ ಏಕಾಪಥ ರಸ್ತೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ ಸರಣಿ ಅಪಘಾತಗಳನ್ನು ಸೃಷ್ಟಿಸಿ ಸಾವಿರಾರು ಅಮಾಯಕ ಜೀವಗಳನ್ನು ಬಲಿತೆಗೆದುಕೊಳ್ಳುವ ಹಂತಕ ಹೆದ್ದಾರಿಯಾಗಿತ್ತು. ಇಂತಹ ಸಮಯದಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದು ದೇಶದ ಪ್ರಧಾನಿಯಾದ ವಾಜಪೇಯಿರವರು ಮೊದಲಿಗೆ ಅಭಿವೃದ್ದಿ ಕಲ್ಪನೆಯ ಮೂಲವಾದ ತಮ್ಮ ಕನಸಿನ ಕೂಸದ ರಾಷ್ಟ್ರೀಯ ಹೆದ್ದಾರಿ ಯೋಜನೆಯಾದ ‘ಚಿನ್ನದ ಚತುಷ್ಪಥ’ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯು ಅನೇಕ ಪ್ರಮುಖ ನಗರಗಳು ಮತ್ತು ಬಂದರು ಪಟ್ಟಣಗಳ ಮಧ್ಯೆ ಉತ್ತಮವಾದ ಮತ್ತು ಅತೀ ವೇಗದ ಸಾರಿಗೆ ಸಂಪರ್ಕ ಜಾಲವನ್ನು ಸ್ಥಾಪಿಸಿದೆ. ಇದು ಭಾರತದಲ್ಲಿರುವ ಜನರು ಮತ್ತು ಉತ್ಪಾದನೆಗಳನ್ನು ಸುಲಭ ಹಾಗೂ ಸಾರಗವಾಗಿ ಸಾಗಿಸಲು ಅನುವು ಮಾಡಿಕೊಟ್ಟಿದೆ. ಸಣ್ಣ ಪಟ್ಟಣಗಳ ಮಾರುಕಟ್ಟೆಗಳ ಪ್ರವೇಶಕ್ಕೆ, ಕೈಗಾರಿಕೆ ಮತ್ತು ಉದ್ಯೋಗದ ಬೆಳವಣಿಗೆಯನ್ನು ಬಲಪಡಿಸಿದೆ.
ಇಂತಹ ಅಮೂಲ್ಯ ಕೊಡುಗೆಗಳನ್ನು ನೀಡಿದ, ಭಾರತದ ಅಭಿವೃದ್ದಿಯ ಬಗ್ಗೆ ವಿಶೇಷ ಕಲ್ಪನೆಗಳನ್ನು ಹೊಂದಿದ್ದ ಈ ಮಹಾನ್ ನಾಯಕ ಇಂದಿನ ಭಾರತೀಯನ ನೆನಪಿನಿಂದ ನಿಧಾನವಾಗಿ ಜಾರುತ್ತಿದ್ದಾರೆ, ಇನ್ನೂ ತಮ್ಮದೇ ಪಕ್ಷವಾದ ಬಿಜೆಪಿಯವರಿಗೆ ವಾಜಪೇಯಿ ಅವರು ಕೇವಲ ಕರಪತ್ರ, ಬ್ಯಾನರ್‍ಗಳಿಗಷ್ಟೇ ಸೀಮಿತ.
ವಾಜಪೇಯಿ ಹಾಗೂ ಅವರ ವ್ಯಕ್ತಿತ್ವವೇ ಅಂತಹದು, ತತ,್ವ ಸಿದ್ದಾಂತ, ಸರಳತೆ, ಸನ್ನಡತೆಗಳಲ್ಲಿ ವಿಶ್ವಾಸ ಇಟ್ಟು ಅದನ್ನು ಆಚರಣೆಯಲ್ಲಿ ತರುವ ಅನೇಕರಿಗೆ ವಾಜಪೇಯಿರವರ ಆದರ್ಶ ಜೀವನ ವಿಶ್ವವಿದ್ಯಾಲಯವಿದ್ದಂತೆ.

ಭಾರತದ ರಾಜಕೀಯದಲ್ಲಿ ಒಂದೇ ಪಕ್ಷದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಇರುವುದು, ಅದರಲ್ಲೂ ವಿರೋಧÀ ಪಕ್ಷದಲೇ ಜೀವಮಾನದ ಹೆಚ್ಚಿನಾಂಶವನ್ನು ಕಳೆಯುವುದು ಕಲ್ಪಿಸಲು ಆಗದ ಸಂಗತಿ. ಇಂದು ನಮ್ಮ ಕಣ್ಮುಂದಿರುವ ಹೆಚ್ಚಿನ ರಾಜಕರಣಿಗಳು ಒಂದೊಲ್ಲ ಒಂದು ಬಾರಿ ಪಕ್ಷ ನಿಷ್ಟೇ ಬದಲಾಯಿಸಿದವರೇ ಮತ್ತು ಅಧಿಕಾರ ಬಂದೋಡನೆ ಅವರೆಷ್ಟು ಬದಲಾಗುತ್ತಿದ್ದಾರೆ ಎಂಬುದು ನಮಗೆ ನಿಮಗೆ ಗೋಚರಿಸುವ ಸಂಗತಿ. ಇವೆಲ್ಲದಕ್ಕೂ ಅಪವಾದವೆಂಬಂತೆ ನಡೆದುಕೊಂಡವರು ಅಟಲ್ ಜೀ.

1996ರಲ್ಲಿ ಮೊದಲ ಬಾರಿಗೆ ವಾಜಪೇಯಿ ಜೀ ರವರು ಭಾರತೀಯ ಪ್ರಜಾಪ್ರಭುತ್ವದ ನಾಯಕತ್ವ ವಹಿಸಿಕೊಂಡಗ ಇಡೀ ದೇಶವೇ ಸಂಭ್ರಮ ಪಟ್ಟಿತು. ಕೆಲವೇ ದಿನಗಳಲ್ಲಿ ಸರ್ಕಾರ ಪತನವಾಯಿತು. ನಂತರ ಮನಸ್ಸು ಮಾಡಿದ್ದರೆ ಎರಡನೇ ಬಾರಿ ಒಂದುವರೆ ವರ್ಷಗಳ ಅಧಿಕಾರವಾದಿಯನ್ನು ಉಳಿಸಿಕೊಳ್ಳಲು ಅವರಿಗೆ ಕಷ್ಟವೇನು ಇರಲಿಲ್ಲ, ಅವತ್ತಿಗೆ ಸದನದಲ್ಲಿ ತನಗಿರುವ ಬಹುಮತದ ಸಾಭೀತಿಗೆ ಇದಿದ್ದು ಒಂದೇ ಒಂದು ಮತದ ಕೊರತೆ ! ಆ ಒಂದು ಮತವನ್ನುಕೊಳ್ಳುವುದು ಅವರಿಗೆ ದೊಡ್ಡ ಕೆಲಸವಾಗಿರಲಿಲ್ಲ, ಆದರೂ ರಾಜಕೀಯ ಮೌಲ್ಯಕ್ಕೆ ಬೆಲೆಕೊಟ್ಟು ಕುದುರೆ ವ್ಯಾಪಾರಕ್ಕೆ ಮನಸ್ಸು ಮಾಡದೆ ರಾಜೀನಾಮೆ ಬಿಸಾಕಿ ಹೊರಬಂದವರು ವಾಜಪೇಯಿ. ಮೌಲ್ಯಕ್ಕಾಗಿ ಅಧಿಕಾರ ತ್ಯಾಗ ಮಾಡುವ ಅಂದಿನ ವಾಜಪೇಯಿಯಲ್ಲಿ! ಸರ್ಕಾರದ, ಅಧಿಕಾರದ ಉಳಿವಿಗಾಗಿ ‘ಓಟಿಗಾಗಿ ಹಣ’ ‘ಅಪರೇಷನ್’ಗಳಂತ ಅನೈತಿಕ ರಾಜಕೀಯ ಪದ್ಧತಿಗಳನ್ನು ಹುಟ್ಟು ಹಾಕುತ್ತಿರುವ ಇಂದಿನ ರಾಜಕಾರಣಿಯಲ್ಲಿ. ಅತ್ಯಂತ ಕೆಲಮಟ್ಟಕ್ಕೆ ಇಳಿದಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ವಾಜಪೇಯಿಯಂತಹ ರಾಜಕೀಯ ನಾಯಕರು ಮತ್ತೆ ಮತ್ತೆ ನೆನಪಾಗುತ್ತಾರೆ.
ಪೋಕ್ರಾನ್‍ನಲ್ಲಿ ಕೈಗೊಂಡ ಪರಮಾಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ನಿಂತುಹೊಗಿದ್ದ ಶಾಂತಿ ಮಾತುಕತೆಗಳನ್ನು ಪುನರ್ ಆರಂಭಿಸಿದ್ದು, ಲಾಹೋರ್ ಬಸ್‍ಯಾತ್ರೆ, ಲಾಹೋರ್ ಒಪ್ಪಂದಕ್ಕೆ ಸಹಿ, ನಂತರ ಪಾಕಿಸ್ತಾನ ಮಾತಿನಂತೆ ನಡೆಯದೆ ಇದ್ದಾಗ, ಯುದ್ದ ಅನಿವಾರ್ಯವೆಂಬಂತ ಪರಿಸ್ಥಿತಿ ನಿರ್ಮಾಣವಾದಗ ಸಂಭವಿಸಿದ ಕಾರ್ಗಿಲ್ ಕದನದಲ್ಲಿನ ವಿಜಯ ಯಾತ್ರೆ ... ಹೀಗೆ ವಾಜಪೇಯಿ ಅವರ ಸಾಧನೆಯ ಪಟ್ಟಿ ಮಾಡುತ್ತಾ ಹೋದರೆ! ಅಬ್ಬಾ.. ಆಳಿದ್ದು ಅರೇಳು ವರ್ಷಗಳಾದರು, ಭಾರತವೆಂಬ ಭಾರತವನ್ನು ಅಭಿವೃದ್ದಿಶೀಲ ರಾಷ್ಟ್ರವನಗಿಸಿದ ಬಹುಪಾಲು ಶ್ರೇಯ ವಾಜಪೇಯಿಗೆ ಸೇರಬೇಕಾದ್ದು.
ಸಮಸ್ತ ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಮುಕ್ತವಾಗಿ ಕೊಂಡಾಡಲ್ಪಡುವ ಏಕ ಮಾತ್ರ ಭಾರತೀಯ ಪ್ರಧಾನಿ ವಾಜಪೇಯಿ ... ‘ಅಜಾತ ಶತ್ರು’ ಎಂಬ ಬಿರುದಾಂಕಿತ ವಾಜಪೇಯಿ ತಮ್ಮ ರಾಜಕೀಯ ವಿರೋಧಿಗಳನ್ನು ಅತ್ಯಂತ ಗೌರವನ್ವಿತವಾಗಿ ಕಾಣುತ್ತಿದ್ದರು ಹಾಗೂ ಅವರ ಒಳ್ಳೆಯ ಕಾರ್ಯಗಳನ್ನು ಶ್ಲಾಘಿಸುತ್ತಿದ್ದರು. ಇದಕ್ಕೆ ನಿದರ್ಶನವೆಂಬಂತೆ 1971ರಲ್ಲಿ ಜರುಗಿದ ಪಾಕಿಸ್ತಾನ ಯುದ್ದದಲ್ಲಿ ಭಾರತೀಯ ಸೇನೆಯನ್ನು ಮುನ್ನಡೆಸಿ ಜಯಗಳಿಸಿದ ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರನ್ನು ಸಂಸತ್ತಿನಲ್ಲಿ ದುರ್ಗಾದೇವಿಗೆ ಹೋಲಿಸಿ ಹೊಗಳಿ ಅಭಿನಂದಿಸಿ ಸುಧೀರ್ಘ ಭಾಷಣ ಮಾಡಿದವರು ವಾಜಪೇಯಿ.

“ಎ ರೈಟ್ ಮ್ಯಾನ್ ಇನ್ ಎ ರಾಂಗ್ ಪಾರ್ಟಿ!” ಎಂದು ಅನೇಕ ಕಾಂಗ್ರೇಸಿಗರಿಂದ ಕರೆಯಲ್ಪಡುತ್ತಾರೆ ಭಾಜಪವನ್ನು ಇಷ್ಟಪಡದ ಅವರ ವಿರೋಧಿಗಳು ಬಹಿರಂಗವಾಗಿ ಅಟಲ್ ಜೀರವರನ್ನು ಮೆಚ್ಚುತ್ತಾರೆ! ಪ್ರಸಕ್ತ ಭಾರತೀಯ ರಾಜಕಾರಣಕ್ಕೆ ಅವರ ಅಗತ್ಯವಿತ್ತೇನೋ ಎಂದು ನನ್ನಂತ ಅನೇಕ ಭಾರತೀಯರಿಗೆ ಮತ್ತೆ ಮತ್ತೆ ಅನಿಸದೆ ಇರದು. ಈಗ ಇರುವ ಯಾವ ನಾಯಕರಲ್ಲೂ ಆ ಮುತ್ಸಧಿತನ ಕಾಣುತ್ತಿಲ್ಲ. ಇನ್ನೂ ಯಾರಲ್ಲಿ ನಾವು ವಾಜಪೇಯಿಯನ್ನು ಹುಡುಕುವುದು? ಕಾಲವೇ ಇದಕ್ಕೆ ಉತ್ತರಿಸಬೇಕು.
 


7 comments:

 1. Replies
  1. ನನ್ನ ಬರಹಗಳನ್ನು ಬ್ಲಾಗ್ ರೂಪಕ್ಕೆ ತರಲು ಕಾರಣರಾದ ವಿನಯರವರಿಗೆ ಧನ್ಯವಾದಗಳು...

   Delete
 2. ಚಂದದ ಲೇಖನ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 3. ಉತ್ತಮ ಲೇಖನ...ವಾಜಪೇಯಿ ಅಂತ ಧುರೀಣರು ನೇಪಥ್ಯಕ್ಕೆ ಹೋದ ಮೇಲೆ ಮಂಗಗಳೆಲ್ಲ ಮುಂದಕ್ಕೆ ಬಂದವು..ಅವರು ಹಾಕಿಕೊಟ್ಟ ದಾರಿಯ ಬಗ್ಗೆ ಹೇಳೋಕೆ ಕೂಡ ಯೋಗ್ಯತೆ ಇಲ್ಲ ಇವಕ್ಕೆ..
  ಕೆಲವು ನಕ್ಷತ್ರಗಳೇ ಹಾಗೆ..ಬೆಳುಕು ತೋರುವುದು ಕ್ಷಣಿಕವಾದರೂ..ಮರೆಯಲಾರದ ನೆನಪನ್ನು ಮೂಡಿಸಿರುತ್ತಾರೆ.ಅಂಥಹ ಧ್ರುವ ನಕ್ಷತ್ರ ಇವರು..

  ReplyDelete