Tuesday, September 11, 2012

ಕಾರ್ .... ಕಾರ್ ..... ಎಲ್ನೋಡಿ ಕಾರ್ ....

 
 
ಕಾರ್ ಕಾರ್ ಎಲ್ನೋಡಿ ಕಾರ್ ಅಂತ ಕಾರಿನಿಂದ ಜಿಗಿದು ರಸ್ತೆಯ ಮೇಲೆ ಕುಣಿದು ಕುಪ್ಪಳಿಸುವ ಯುವ ಜೋಡಿಗಳ ಪ್ರಸಿದ್ದ ಕನ್ನಡ ಚಲನಚಿತ್ರದ ಹಾಡಿನ ದೃಶ್ಯ ಯಾರಿಗೆ ನೆನಪಿಲ್ಲ ಹೇಳಿ! ನುಣುಪದ ರಸ್ತೆಯ ಮೇಲೆ ಇರುವೆಯ ಸಾಲಿನಂತೆ ಸಾಗುವ ಬಣ್ಣ-ಬಣ್ಣದ  ಕಾರ್‍ಗಳ ಸಾಲು ದಶಕದ ಹಿಂದೆ ಕೇವಲ ಅಮೇರಿಕಾ ಎಂಬ ಬಲಿಷ್ಠ ರಾಷ್ಟ್ರದಲ್ಲಿ ಮಾತ್ರ ಕಾಣಸಿಗುವ ದೃಶ್ಯವಾಗಿತ್ತು, ಆದರೆ ಇಂದು ದಾಸರೆಯ ಜಂಬೂ ಸಾವರಿಯನ್ನು ಮೀರುವಂತೆ ನಮ್ಮ ನಾಡಿನ ನಗರ ಪ್ರದೇಶದ ರಸ್ತೆಗಳು ಈ ಕಾರ್‍ಗಳೆಂಬ ಮಾನವ ನಿರ್ಮಿತ ಚಲಿಸುವ ಯಂತ್ರಗಳಿಂದ ತುಂಬಿ ತುಳುಕುತ್ತಿವೆ. ಈ ಮೇಲಿನ ಬದಲಾವಣೆಯಿಂದಲೇ ಹೇಳಬಹುದು ಈ ಹಿಂದಿನ ಎರಡು ದಶಕಗಳಲ್ಲಿ ನಮ್ಮ ಭಾರತ ಆಟೋಮೊಬೈಲ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಸಧಾರಣ ಹಾಗೂ ಈ ಮಟ್ಟ ತಲುಪಲು ಕ್ರಮಿಸಿದ್ದು ಶರವೇಗದಲೆಂದು.
 
ಆಟೋಮೊಬೈಲ್ ಉದ್ಯಮ – ಕಿರು ಪರಿಚಯ :  ಭಾರತೀಯ ಆಟೋಮೊಬೈಲ್ ಉದ್ಯಮ ಸಾರಸರಿ ವಿಶ್ವದಲ್ಲೇ ಏಳನೇ ಸ್ಥಾನದಲ್ಲಿದೆ. ವಾರ್ಷಿಕ 2.6 ಮಿಲಿಯನ್ ವಾಹನಗಳ ಉತ್ಪಾದನೆಯೊಂದಿಗೆ ರಪ್ತಿನಲ್ಲಿ ಏಷ್ಯಾ ಖಂಡದಲ್ಲಿ ಜಪಾನ್ ಕೊರಿಯಾ ಹಾಗೂ ಥೈಲಾಂಡ್‍ಗಳ ನಂತರ ನಾಲ್ಕನೇ ಸ್ಥಾನದಲ್ಲಿದ್ದು ಮುಂಚುಣಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ. 1991ರ ನರಸಿಂಹರಾಯರ ಸರ್ಕಾರದ ಜನಪ್ರಿಯ ಆರ್ಥಿಕ ನೀತಿ ಹಾಗೂ ನೀಡಿದ ರಿಯಾಯಿತಿಗಳಿಂದ ಆಟೋಮೊಬೈಲ್ ಉದ್ಯಮ ಸುಧೀರ್ಘ ಬೆಳವಣಿಗೆಯತ್ತ ಹೆಜ್ಜೆ ಹಾಕಿತು. ಹಲವು ಭಾರತೀಯ ಆಟೋಮೊಬೈಲ್ ತಯಾರಕರಾದ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಮಹೇಂದ್ರ ಅಂಡ್ ಮಹೇಂದ್ರ ತಮ್ಮ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಹಿವಾಟನ್ನು ವಿಸ್ತರಿಸಿದವು. ಮುಂದಿನ ದಿನಗಳಲ್ಲಿ ಭಾರತೀಯ ಪ್ರಬಲ ಆರ್ಥಿಕ ಪ್ರಗತಿಯಿಂದ ದೇಶೀಯ ಆಟೋಮೊಬೈಲ್ ಮಾರುಕಟ್ಟೆ ವೃದ್ದಿಯಾಗಿ ಅಂತರಾಷ್ಟ್ರೀಯ ಹೂಡಿಕೆದಾರರನ್ನು ಆರ್ಕಷಿಸಿತ್ತು. ಉದ್ಯಮದ ಪ್ರಕಾರ 2009ರ ಕೊನೆಯ ಹೊತ್ತಿಗೆ ಭಾರತದಲ್ಲಿ ಕಾರ್‍ಗಳ ಮಾರಾಟ ಸುಮಾರು ಒಂದು ಲಕ್ಷ ಮೀರಿದೆ. 80ರ ದಶಕ ಭಾರತಕ್ಕೆ ಈ ಕ್ಷೇತ್ರದಲ್ಲಿ ನಿರ್ಣಯಕ ಘಟ್ಟ, ಹಲವು ಜಪಾನಿ ಕಂಪನಿಗಳು ಭಾರತೀಯ ಉತ್ಪದಕರೊಂದಿಗೆ ಸಹಭಾಗಿತ್ವದಲ್ಲಿ ಮೋಟಾರ್ ಸೈಕಲ್ ಹಾಗೂ ಸರಕು ಸಾಗಣೆ ವಾಣಿಜ್ಯ ವಾಹನಗಳ ತಯಾರಿಕ ಘಟಕಗಳು ಸ್ಥಾಪಿಸಲು ಪ್ರಾರಂಭಿಸಿದವು. ಈ ಸಮಯದಲ್ಲಿಯೇ ಭಾರತೀಯ ಸರ್ಕಾರ ಸುಜಿಕಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಮಾರುತಿ ಸಣ್ಣ ಕಾರುಗಳ ತಯಾರಿಕೆಗೆ ಕೈ ಹಾಕಿ ಯಶಸ್ವಿಯಾಯಿತು ಹಾಗೂ ‘ಮಾರುತಿ’ ಕಾರ್ ಆಟೋಮೊಬೈಲ್ ಕ್ಷೇತ್ರದ ಪ್ರಭಾವಿ ಬ್ರಾಂಡ್ ಆಗಿ ಹೊರ ಹೊಮ್ಮಿತು ಹಾಗೂ ಇಂದಿಗು ಆ ಮುಂಚುಣಿ  ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ.
 
ನಂತರದ ದಿನಗಳಲ್ಲಿ ದೇಶಿಯ ಕಂಪನಿಯಗಳಾದ ಟಾಟಾ ಹಾಗೂ ಮಹಿಂದ್ರಾ ಕಂಪನಿಗಳು ತಮ್ಮದೆ ರೀತಿಯಲ್ಲಿ ಭಾರತಿಯ ಆಟೋಮೊಬೈಲ್ ಕ್ಷೇತ್ರವನ್ನು ಹಸಿರುಗೊಳಿಸಿ ಹತ್ತು ಹಲವಾರು ಶ್ರೇಣಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗಳಿಸಿದವು, ಭಾರತದಲ್ಲಿ ಅಷ್ಟೆ ಅಲ್ಲದೆ ವಿದೇಶಗಳಲ್ಲೂ ನಮ್ಮ ಟಾಟಾ ಹಾಗೂ ಮಹಿಂದ್ರಾ ವಾಹನಗಳು ಅತ್ಯಂತ ಜನಪ್ರಿಯ ಹಾಗೂ ಬೇಡಿಕೆ ಉಳ್ಳದು. ಇನ್ನೂ ಟಾಟಾ ನ್ಯಾನೊಗೆ ಬಂದರೆ, ನ್ಯಾನೂ ಸಣ್ಣಕಾರು  ಯೋಜನೆಯು ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿನ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತಿದೆ, ಇದು ಜಾಗತಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದೆ, ಉದ್ಯಮ ವಲಯದ ಅಧ್ಯಯನ ಪ್ರಕಾರ 2020ರ ಒಳಗೆ ಭಾರತದ ಆಟೋಮೊಬೈಲ್ ಉದ್ಯಮ ಜಾಗತಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚುಣಿಗೆ ಸರಿಯುವುದು ಸ್ಪಷ್ಠವಾಗಿದೆ.
 ವಿದೇಶಿ ಬಂಡವಾಳ ಹೂಡಿಕೆದಾರರು ಸಾಲುಸಾಲಗಿ ಭಾರತದೇಡೆಗೆ ಬರುತ್ತಿದೆರೆ, ಹಿಂದೆಂದಿಗಿತಲೂ ಇಂದು ಈ ಉದ್ಯಮ ವ್ಯಾವಹಾರದಲ್ಲಿ ಅವಕಾಶಗಳು ಹೆಚ್ಚಾಗಿವೆ. ಕುಶಲತೆ, ಸಂಪನ್ಮೂಲ ಮತ್ತು ಸಾಹಸ ಇವೆ ನಮ್ಮ ಶಕ್ತಿ, ಇವೆಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ನಮ್ಮ ಯುವಜನತೆ ಪೂರಕ ತಾಂತ್ರಿಕ ಶಿಕ್ಷಣದೊಂದಿಗೆ ಈ ಕ್ಷೇತ್ರದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿ, ಅಬ್ದುಲ್ ಕಲಾಂರ 2020 ಭಾರತ ಬಲಿಷ್ಠ ರಾಷ್ಟ್ರದ ಭವ್ಯ ಕನಸನ್ನು ಸಾಕಾರಗಳಿಸಬೇಕಾಗಿದೆ.
 
 
 
 
 

5 comments:

  1. ನಿಮ್ಮ ಈ ಲೇಖನ ಚೆನ್ನಾಗಿ ಮೂಡಿಬಂದಿದೆ. ಆಟೋಮೊಬೈಲ್ ಕ್ಷೇತ್ರದ ಬಗ್ಗೆ ಒಳ್ಳೆ ಮಾಹಿತಿ , ಮತ್ತಷ್ಟು ಬರಲಿ ಇಂತಹ ವಿಚಾರಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. ಧನ್ಯವಾದಗಳು ಬಾಲು ಸರ್...ನಿಮ್ಮ ಪ್ರೋತ್ಸಾಹ ಹಾಗು ಅಭಿಮಾನ ಹೀಗೆ ಇರಲಿ...

    ReplyDelete
  3. ಕ್ರಾಂತಿ ಕ್ರಾಂತಿ...ಎಲ್ಲದೆಯಲ್ಲೂ ಬೇಕು ಕ್ರಾಂತಿ..ಇಂತಹ ಒಂದು ಕ್ರಾಂತಿಯ ಬಗ್ಗೆ ಲೇಖನ ಸುಂದರವಾಗಿದೆ..ಹರಿಯಲಿ, ಬೆಳಗಲಿ ನಿಮ್ಮ "ಕಾಂತೀಯ" (ಕ್ರಾಂತೀಯ) ಬರವಣಿಗೆ

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತ್, ಇಂತಹ ಪ್ರೋತ್ಸಾಹದಾಯಕ ಮಾತುಗಳೇ ಮುಂದಿನ ಹೆಜ್ಜೆ ಇಡಲು ಪ್ರೇರೇಪಿಸುವುದು....

      Delete
  4. Hi Rupesh,

    Good to read all your blogs.. keepup good work..

    -Arjun

    ReplyDelete