Thursday, September 13, 2012

 
‘ಅಣ್ಣಾವ್ರು’ ಯಾಕೆ ರಾಜಕೀಯಕ್ಕೆ ಬರಲಿಲ್ಲ . . !
 


(ರಾಜಕುಮಾರ್ ಹುಟ್ಟುಹಬ್ಬದಂದು ಪತ್ರಿಕೆ ಒಂದರಲ್ಲಿ ನಾನು ಬರೆದಿದ್ದ ಲೇಖನ)
 
ನಮ್ಮದೇ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದ ವೇದಿಕೆಯದು. ಖ್ಯಾತ ಸಾಹಿತಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರಿಗೆ ವೇದಿಕೆಯಲ್ಲಿದ್ದ ಸಾಹಿತಿ ಲೇಖಕರು ಬಹುಪಾಲು ಎಲ್ಲಾ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಪ್ರಶ್ನೆಗಳನ್ನು ಕೇಳಿ ಮುಗಿಸಿದ್ದರು. ಕಿರಿಯನಾದ ನನಗೆ ಕೊನೆಗೆ ಸಿಕ್ಕ್ಕ ಅವಕಾಶದಲ್ಲಿ ಕೇಳಿದ ಸರಳ ಪ್ರಶ್ನೆನಿಮಗೆ ಇಷ್ಟವಾದ ಕನ್ನಡದ ನಟ ಹಾಗೂ ಚಲನಚಿತ್ರ ಯಾವುದುಎಂಬ ಪ್ರಶ್ನೆಗೆ ಅವರಿಂದ ದೊರೆತ ಉತ್ತರ ಡಾ||ರಾಜಕುಮಾರ್ ಹಾಗೂ ಬಂಗಾರದ ಮನುಷ್ಯ. ಮೇಲಿನ ಘಟನೆಯನ್ನು ಅವಲೋಕಿಸಿದಾಗ ಸಾಮಾನ್ಯವಾಗಿ ಮನದಟ್ಟಗುವ ಅಂಶವೆಂದರೆ ರಾಜ್ ಚಿತ್ರಗಳನ್ನು ನೋಡಿರಾದ ಮಕ್ಕಳು, ರಾಜ್ ಚಿತ್ರ ನೋಡುವ ಚಿತ್ರ ರಸಿಕರು ಹಾಗೂ ಸಾಮಾನ್ಯರಿಗಿಂತ ಭಿನ್ನವಾದ ಚಿಂತನೆ ಮಾಡುವ ಚಲನ ಚಿತ್ರ ಹಾಗೂ ನಟರಿಂದ ಪ್ರಭಾವಿತರಾಗದ ಸಾಹಿತಿ ಬುದ್ದಿ ಜೀವಿಗಳಿಗೂ ಡಾ||ರಾಜ್ ಪ್ರಿಯವೆನಿಸಲು ಕೇವಲ ರಾಜ್ ಚಿತ್ರ ಹಾಗೂ ನಟನೆಯೊಂದೆ ಕಾರಣವಲ್ಲದೇ ಮಹಾನ್ ನಟನ ವ್ಯಕ್ತಿತ್ವ ನಡೆ ನುಡಿಗಳೇ ಎನ್ನುವುದು ಹಗಲಿನಷ್ಠೆ ಸತ್ಯವೆನಿಸುತ್ತದೆ.



ಕನ್ನಡಾಭಿಮಾನ ಮತ್ತು ರಾಜ್ ವ್ಯಕ್ತಿತ್ವ : ಕರುನಾಡಿನ ಸಾಹಿತಿಗಳು ಎಂದರೆ ನಾಡಿಗೆ ವರ ಎಂದೆ ರಾಜ್ ಭಾವಿಸುತ್ತಿದ್ದರು. ರಾಜ್ ಜೀವಿತಾವಧಿಯಲ್ಲಿ ಸಾಹಿತಿಗಳೊಂದಿಗೆ, ಅತ್ಯಂತ ಮಧುರವಾದ ಸಂಬಂಧವನ್ನು ಹೊಂದಿದ್ದರು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಬೆಸೆದುಕೊಂಡ ಸಾಹಿತಿಗಳು ಹಾಗೂ ರಾಜಣ್ಣರ ಸಂಬಂಧ ಅನುಬಂಧವಾಗಿ ಕಡೆಯವರೆಗೆ ಉಳಿದು ಬಿಟ್ಟಿತು. ಸಾಹಿತಿಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದ ರಾಜ್ ಕನ್ನಡದ ಹಲವಾರು ಉತ್ತಮ ಕಥೆ ಕಾದಂಬರಿ ಆಧರಿತ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. ಕನ್ನಡದ ಹಿರಿಯ ಹಾಗೂ ಹೆಸರಾಂತ ಕವಿಗಳ ಜನಪ್ರಿಯ ಶ್ರೇಷ್ಠ ಕವನಗಳನ್ನು ಮನ ತುಂಬಿ ಹಾಡಿದ್ದಾರೆ. ಹೀಗೆ ಚಿತ್ರ ಕಲಾವಿದರಾಗಿ ತಮಗೆ ಪ್ರಿಯವಾದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಮಿತಿಯಲ್ಲಿ ಅಪಾರ ಸೇವೆ ಸಲ್ಲಿಸಿಕೊಂಡು ಬಂದಿದ್ದರು.

ಕನ್ನಡ ಭಾಷಾ ಇತಿಹಾಸದಲ್ಲಿ ಡಾ||ರಾಜಕುಮಾರ್ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದಷ್ಟು ಮೇರು ವ್ಯಕ್ತಿತ್ವ ಮತ್ತೊಂದಿಲ್ಲ. ಕನ್ನಡರಾಜೋತ್ಸವಾದ ಸಮಾರಂಭಗಳಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಚಿತ್ರ ಪಟ ಎಷ್ಟು ಅನಿವಾರ್ಯವೋ ಅಷ್ಠೇ ಅನಿವಾರ್ಯ ರಾಜ್ರವರ ಪೋಟೋ. ಇದು ಉತ್ಪ್ರೇಕ್ಷೆಯಲ್ಲ ವಾಸ್ತವ. ರಾಜ್ ನಟರೆಂಬ ವ್ಯಕ್ತಿತ್ವವನ್ನು ಮೀರಿ ಇಷ್ಟವಾಗುವ ವ್ಯಕ್ತಿತ್ವ ಪಡೆದುಕೊಂಡಿದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದು.

ರಾಜ್ ಮತ್ತು ರಾಜಕೀಯ : ಅಭಿನಯದಲ್ಲಿ, ಜನಪ್ರಿಯತೆಯಲ್ಲಿ ರಾಜಕುಮಾರ್ ಅವರಷ್ಟೇ ಅಥವಾ ಅವರಿಗಿಂತಲು ಒಂದು ಸುತ್ತು ಮಿಗಿಲಾದ ನಟರನ್ನು ಭಾರತ ಕಂಡಿದೆ. ನೆರೆಯ ರಾಜ್ಯಗಳ ನಟರಾದ ಎನ್.ಟಿ.ರಾಮರಾವ್, ಎಂ.ಜಿ.ರಾಮಚಂದ್ರನ್, ಮತ್ತು ಅಮಿತಾಬ್ ಬಚ್ಚನ್ ಉದಾಹರಣೆಗಳು ಪ್ರಸ್ತುತ. ಆದರೆ ಸೌಜನ್ಯದಲ್ಲಿ? ತನ್ನ ಸಾಮಥ್ರ್ಯಗಳ ಅರಿವಿನಲ್ಲಿ? ವಿಚಾರದಲ್ಲಿ ರಾಜಕುಮಾರ್ ಎಲ್ಲರಿಗಿಂತಲೂ ಬೇರೆಯಾಗಿ ನಿಲ್ಲುತ್ತಾರೆ. ಅವರಿಗೆ ಅವರೇ ಸಾಟಿ. ಮೇಲಿನ ನಟರು ತಮ್ಮ ಜನಪ್ರಿಯತೆಯನ್ನು ರಾಜಕೀಯ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಉಪಯೋಗಿಸಿಕೊಂಡರು. ಕರ್ನಾಟಕದ ಮಟ್ಟಿಗೆ ಎಂ.ಜಿ.ಆರ್. ಮತ್ತು ಎನ್.ಟಿ.ಆರ್. ರಂತೆ ಜನಪ್ರಿಯರಾದ ರಾಜ್ ಏಕೆ ರಾಜಕೀಯಕ್ಕೆ ಇಳಿಯಲ್ಲಿಲ್ಲ ಎಂಬ ಪ್ರಶ್ನೆ ಹಲವರಿಗೆ ಇಂದಿಗೂ ಕಾಡಿದ್ದಿದೆ. ಸರಳ ಪ್ರಶ್ನೆಗೆ ಉತ್ತರ ಅವರಿಗೆ ಇಷ್ಟವಿರಲ್ಲಿಲ್ಲವೇನೋ ಎಂದು ಹೇಳಿಕೊಂಡು ಬಿಡಬಹುದು. ಆದರೆ ತೆರೆಯ ಮೇಲೆ ಅದ್ಭುತ ನಟರಾದ ರಾಜ್ಗೆ ನಿಜ ಜೀವನದಲ್ಲಿ ಅಷ್ಟೇ ಅದ್ಭುತವಾಗಿ ನಮ್ಮ ರಾಜಕರಣೀಗಳಂತೆ ನಟಿಸುವುದು ತಿಳಿದಿರಲಿಲ್ಲ. ರಾಜಕೀಯ ನಾಯಕನಾಗಲೂ ಕೇವಲ ಒಳ್ಳೆಯ ಮನುಷ್ಯನಾಗಿರದೇ ಧಾರಳವಾಗಿ ಆಶ್ವಾಸನೆ ಕೊಡುವ, ಅವುಗಳನ್ನು ಪೂರೈಸದಿದ್ದರೆ. ಯಾಕೆ ಹೀಗಾಯಿತು ಎಂದು ನಂಬಿಸುವ, ಹಿಂಬಾಲಕರನ್ನು ನಿಯಂತ್ರಿಸುವ, ವಿರೋಧಿಗಳನ್ನು ದಿಕ್ಕು ತಪ್ಪಿಸುವ ಕುಟಿಲ ನೀತಿ, ಇಂತಹ ಯಾವುದೇ ಗುಣಗಳು ತಮ್ಮಲ್ಲಿ ಇರದೇ ಇರುವ ಅರಿವಿದ್ದ ರಾಜ್ ರಾಜಕೀಯಕ್ಕೆ ಬರಲಿಲ್ಲ. ಇದರಿಂದಾಗಿಯೇ ಅಷ್ಟೇನು ವಿದ್ಯಾವಂತರಲ್ಲದ ಮುಗ್ಧ ಕಲಾವಿದಮುತ್ತುರಾಜ್ ಕರ್ನಾಟಕದರತ್ನರಾಗಿದ್ದು.
ಅಂದ ಹಾಗೆ ಇಂದು ಏಪ್ರಿಲ್ 24, ಎರಡು ಕಾರಣಗಳಿಂದ ಇಂದು ಮಹತ್ವ ದಿನ. ಒಂದು ಕನ್ನಡ ನಾಡು ಕಂಡ ಅದ್ಭುತ ಪ್ರತಿಭೆ ವರನಟ ಡಾ||ರಾಜಕುಮಾರ್ ರವರ ಜನ್ಮ ದಿನ, ಎರಡು ಜಗತ್ತು ಕಂಡ ಅದ್ಭುತ ಕ್ರಿಕೆಟ್ ಪ್ರತಿಭೆ ಸಚಿನ್ ತೆಂಡುಲ್ಕರ್ ಜನ್ಮದಿನ ಅಪ್ರತಿಮ ವ್ಯಕ್ತಿತ್ವ ಇರುವ ಇಬ್ಬರು ಸರ್ವಕಾಲಕ್ಕೂ ಶ್ರೇಷ್ಠರು! ಇಂತಹವರು ಯುಗಕೊಬ್ಬರು. ಕನ್ನಡಿಗರ ಹೃದಯದಲ್ಲಿ ಚಿರಂಜೀವಿಯಾಗಿರುವ ರಾಜ್ ಹಾಗೂ ಸಮಸ್ತ ಭಾರತೀಯರ ಅಚ್ಚುಮೆಚ್ಚಿನ ಕ್ರಿಕೆಟ್ಪಟು ಸಚಿನ್ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯಗಳು.

 

3 comments:

  1. ರಾಜ್ ಬಗ್ಗೆ ಲೇಖನ...ಚೆನ್ನಾಗಿದೆ..ರಾಜ್ ರಾಜಕೀಯಕ್ಕೆ ಬರಲಿಲ್ಲ..ಬಂದಿದ್ದರು ಹೆಚ್ಚು ದಿನ ರಾಜಕೀಯದಲ್ಲಿ ಉಳಿಯುತ್ತಿರಲಿಲ್ಲ..ಅವರ ನಟನಸಾಮ್ರಜ್ಯಕ್ಕೆ ಅಧಿಪತಿಯಾಗಿದ್ದಾಗ..ಕೇವಲ ಐದು ವರ್ಷಗಳ ರಾಜ್ಯಭಾರ ಯಾಕೆ ಅವರಿಗೆ..
    ಅವರಿಗೆ ಬಂದಿದ್ದ ಬಳುವಳಿ ನಟನೆ..ಅದಕ್ಕೆ ತಕ್ಕ ಕಾಲ ೧೯೫೦-೧೯೮೦ ಸುಂದರ ಚಿತ್ರಗಳು ಕಥೆಯ ಮೇಲೆ, ಸಂಭಾಷಣೆ, ಹಾಡುಗಳಿಂದಲೇ ನಿಲ್ಲುತ್ತಿದ್ದ ಕಾಲ..ಮತ್ತು ಅವರ ಹಿಂದೆ ನಿಂತಿದ್ದ ಅವರ ಶಕ್ತಿ ಹಾಗು ತಮ್ಮ ಶ್ರೀ ವರದಪ್ಪ
    ಸುಂದರ ಲೇಖನ..ಖುಷಿಯಾಗುತ್ತದೆ..http://moved-movies.blogspot.in/2011_04_01_archive.html

    ReplyDelete
  2. nice one :)
    hope u might like my blog too
    at
    http://www.pallakki.blogspot.in/

    ReplyDelete